ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (KMF SHIMUL) ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (SHIMUL Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
SHIMUL Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (KMF SHIMUL)
ವೇತನ ಶ್ರೇಣಿ: ₹34,100 – ₹99,400/- ಪ್ರತಿ ತಿಂಗಳು
ಹುದ್ದೆಗಳ ಸಂಖ್ಯೆ: 27
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
- ಸಹಾಯಕ ವ್ಯವಸ್ಥಾಪಕರು (F&F): 03
- ವಿಸ್ತರಣಾಧಿಕಾರಿ ಗ್ರೇಡ್-3: 05
- ಕೆಮಿಸ್ಟ್ ಗ್ರೇಡ್-2 (ಕೆಮಿಸ್ಟ್ರಿ): 04
- ಕೆಮಿಸ್ಟ್ ಗ್ರೇಡ್-2 (ಮೈಕ್ರೊಬಯಾಲಜಿ): 02
- ಕಿರಿಯ ಸಿಸ್ಟಂ ಆಪರೇಟರ್: 03
- ಕಿರಿಯ ತಾಂತ್ರಿಕರು – ಎಲೆಕ್ಟ್ರಿಕಲ್: 05
- ಕಿರಿಯ ತಾಂತ್ರಿಕರು – ರೆಫ್ರಿಜರೇಷನ್ (M.R.A.C.): 02
- ಕಿರಿಯ ತಾಂತ್ರಿಕರು – ಬಾಯ್ಲರ್ ಅಟೆಂಡಂಟ್: 03
ವೇತನ ಶ್ರೇಣಿ:
- ಸಹಾಯಕ ವ್ಯವಸ್ಥಾಪಕರು (F&F): ರೂ. 83700-155200
- ವಿಸ್ತರಣಾಧಿಕಾರಿ ಗ್ರೇಡ್-3: ರೂ. 54175-99400
- ಕೆಮಿಸ್ಟ್ ಗ್ರೇಡ್-2 (ಕೆಮಿಸ್ಟ್ರಿ): ರೂ. 44425-83700
- ಕೆಮಿಸ್ಟ್ ಗ್ರೇಡ್-2 (ಮೈಕ್ರೊಬಯಾಲಜಿ): ರೂ. 44425-83700
- ಕಿರಿಯ ಸಿಸ್ಟಂ ಆಪರೇಟರ್: ರೂ. 44425-83700
- ಕಿರಿಯ ತಾಂತ್ರಿಕರು – ಎಲೆಕ್ಟ್ರಿಕಲ್: ರೂ. 34100-67600
- ಕಿರಿಯ ತಾಂತ್ರಿಕರು – ರೆಫ್ರಿಜರೇಷನ್ (M.R.A.C.): ರೂ. 34100-67600
- ಕಿರಿಯ ತಾಂತ್ರಿಕರು – ಬಾಯ್ಲರ್ ಅಟೆಂಡಂಟ್: ರೂ. 34100-67600
ಶೈಕ್ಷಣಿಕ ಅರ್ಹತೆ:
ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ SSLC, ಡಿಪ್ಲೋಮಾ, ಪದವಿ, B.Sc ಪೂರೈಸಿರಬೇಕು. ಹೆಚ್ಚಿನ ಶೈಕ್ಷಣಿಕ ಮಾಹಿತಿಗಾಗಿ ಅಧಿಸೂಚನೆಯನ್ನು ಓದಿ.
ವಯೋಮಿತಿ:
SHIMUL ಅಧಿಸೂಚನೆ ಪ್ರಕಾರ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷ ನಿಗದಿ ಮಾಡಿದ್ದಾರೆ.
ವಯೋಮಿತಿ ಸಡಿಲಿಕೆ:
- ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳು: 3 ವರ್ಷ
- SC/ST ಅಭ್ಯರ್ಥಿಗಳು: 5 ವರ್ಷ
ಅರ್ಜಿ ಶುಲ್ಕ:
- ಪ್ರವರ್ಗ 2A, 2B, 3A ಮತ್ತು 3B ಅಭ್ಯರ್ಥಿಗಳು: ₹500/-
- ಇತರೆ ಅಭ್ಯರ್ಥಿಗಳು: ₹1000/-
ಪಾವತಿಸುವ ವಿಧಾನ: ಆನ್‌ಲೈನ್
SHIMUL Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 28-08-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 29-09-2025
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: shimul.coop, virtualofficeerp.com