ರಸ್ತೆ ಸಾರಿಗೆ ಇಲಾಖೆ ನೇಮಕಾತಿ 2025, ಆನ್‌ಲೈನ್ ಅರ್ಜಿ ಆಹ್ವಾನ | KKRTC Recruitment 2025 Apply Online For Conductor, Assistant Accountant Posts

Telegram Group Join Now
WhatsApp Group Join Now

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KKRTC Recruitment 2025) ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದೊಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.

KKRTC Recruitment 2025 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC)
ಹುದ್ದೆಗಳ ಸಂಖ್ಯೆ: 316
ವೇತನ ಶ್ರೇಣಿ: ರೂ.18,660 – ರೂ.42,800
ಉದ್ಯೋಗ ಸ್ಥಳ: ಕರ್ನಾಟಕ

KKRTC Recruitment 2025 ಹುದ್ದೆಗಳ ವಿವರ:

ಹೈದರಾಬಾದ್ ಕರ್ನಾಟಕ ವೃಂದ (HK):
• ಸಹಾಯಕ ಲೆಕ್ಕಿಗ – 13 ಹುದ್ದೆಗಳು
• ನಿರ್ವಾಹಕ (ಕಂಡಕ್ಟರ್) – 240 ಹುದ್ದೆಗಳು
ಒಟ್ಟು: 253 ಹುದ್ದೆಗಳು

ಉಳಿಕೆ ಮೂಲ ವೃಂದ (NHK):
• ಸಹಾಯಕ ಲೆಕ್ಕಿಗ – 3 ಹುದ್ದೆಗಳು
• ನಿರ್ವಾಹಕ (ಕಂಡಕ್ಟರ್) – 60 ಹುದ್ದೆಗಳು
ಒಟ್ಟು: 63 ಹುದ್ದೆಗಳು

ವೇತನ ಶ್ರೇಣಿ:
• ಸಹಾಯಕ ಲೆಕ್ಕಿಗ – ರೂ.23,990 ರಿಂದ ರೂ.42,800
• ನಿರ್ವಾಹಕ (ಕಂಡಕ್ಟರ್) – ರೂ.18,660 ರಿಂದ ರೂ.25,300

ಶೈಕ್ಷಣಿಕ ಅರ್ಹತೆ:
KKRTC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಈ ಕೇಳಗಿನ ವಿದ್ಯಾರ್ಹತೆ ಪಡೆದಿರಬೇಕು.
ಸಹಾಯಕ ಲೆಕ್ಕಿಗ ಹುದ್ದೆಗೆ – ವಾಣಿಜ್ಯ ವಿಭಾಗದಲ್ಲಿ ಪದವಿ ಮತ್ತು ಕನಿಷ್ಠ 3 ವರ್ಷಗಳ ಬ್ಯಾಂಕಿಂಗ್ ಅಥವಾ ಲೆಕ್ಕಪತ್ರ ವಿಭಾಗದ ಅನುಭವ ಅಗತ್ಯ. ಕಂಪ್ಯೂಟರ್ ಜ್ಞಾನ ಇರಬೇಕು.
ನಿರ್ವಾಹಕ (ಕಂಡಕ್ಟರ್) ಹುದ್ದೆಗೆ – PUC ಅಥವಾ ತತ್ಸಮಾನ ವಿದ್ಯಾರ್ಹತೆ.

KKRTC Recruitment 2025 ವಯೋಮಿತಿ:
ಕರ್ನಾಟಕ ಪರೀಕ್ಷಾ ಪಾಧಿಕಾರ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಈ ಕೇಳಗಿನ ವಯೋಮಿತಿ ಹೊಂದಿರಬೇಕು.

ಅರ್ಜಿ ಶುಲ್ಕ:
• 2A, 2B, 3A, 3B ಅಭ್ಯರ್ಥಿಗಳು – ರೂ.750
• SC/ST ಮತ್ತು ಮಾಜಿ ಸೈನಿಕರು – ರೂ.500
ಪಾವತಿಸುವ ವಿಧಾನ – ಆನ್‌ಲೈನ್

ಪ್ರಮುಖ ದಿನಾಂಕಗಳು:
• ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-10-2025
• ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 10-11-2025
• ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ: 11-11-2025

ಪ್ರಮುಖ ಲಿಂಕ್‌ಗಳು:
• ಅಧಿಸೂಚನೆ (HK): ಡೌನ್‌ಲೋಡ್
• ಅಧಿಸೂಚನೆ (NHK): ಡೌನ್‌ಲೋಡ್
• ಆನ್‌ಲೈನ್ ಅರ್ಜಿ: Apply ಮಾಡಿ
• ಅಧಿಕೃತ ವೆಬ್‌ಸೈಟ್: kkrtc.karnataka.gov.in, cetonline.karnataka.gov.in/kea

ಕೃಷಿ ಇಲಾಖೆ 2025, ಆನ್‌ಲೈನ್ ಅರ್ಜಿ ಆಹ್ವಾನ

Leave a Comment