ಚಿಕ್ಕಮಗಳೂರು ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Chikkamagaluru Anganwadi Recruitment 2025) ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಬೇಕು.
Chikkamagaluru Anganwadi Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD ಚಿಕ್ಕಮಗಳೂರು)
ವೇತನ ಶ್ರೇಣಿ: ಇಲಾಖೆಯ ನಿಯಮಾನುಸಾರ
ಹುದ್ದೆಗಳ ಸಂಖ್ಯೆ: 332
ಉದ್ಯೋಗ ಸ್ಥಳ: ಚಿಕ್ಕಮಗಳೂರು ಜಿಲ್ಲೆ
ಹುದ್ದೆಗಳ ವಿವರ:
ಚಿಕ್ಕಮಗಳೂರು: ಕಾರ್ಯಕರ್ತೆ – 7, ಸಹಾಯಕಿ – 48
ಕದೂರು: ಕಾರ್ಯಕರ್ತೆ – 11, ಸಹಾಯಕಿ – 70
ಕೊಪ್ಪ: ಕಾರ್ಯಕರ್ತೆ – 6, ಸಹಾಯಕಿ – 25
ಮೂಡಿಗೆರೆ: ಕಾರ್ಯಕರ್ತೆ – 4, ಸಹಾಯಕಿ – 54
ನರಸಿಂಹರಾಜಪುರ: ಕಾರ್ಯಕರ್ತೆ – 8, ಸಹಾಯಕಿ – 27
ಶೃಂಗೇರಿ: ಕಾರ್ಯಕರ್ತೆ – 1, ಸಹಾಯಕಿ – 13
ತಾರೀಕೆರೆ: ಕಾರ್ಯಕರ್ತೆ – 6, ಸಹಾಯಕಿ – 52
ಶೈಕ್ಷಣಿಕ ಅರ್ಹತೆ:
WCD ಚಿಕ್ಕಮಗಳೂರು ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ SSLC (10ನೇ ತರಗತಿ) ಅಥವಾ PUC (12ನೇ ತರಗತಿ) ಪಾಸಾಗಿರಬೇಕು.
ವಯೋಮಿತಿ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿಕ್ಕಮಗಳೂರು ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 19 ವರ್ಷ ಹಾಗೂ ಗರಿಷ್ಠ 35 ವರ್ಷ.
ವಯೋಮಿತಿ ಸಡಿಲಿಕೆ:
PWD ಅಭ್ಯರ್ಥಿಗಳಿಗೆ – 10 ವರ್ಷ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: 09-10-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 04-11-2025
ಪ್ರಮುಖ ಲಿಂಕ್‌ಗಳು:
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್‌ಸೈಟ್: karnemakaone.kar.nic.in