ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕಟಣೆ (KSIIDC Recruitment 2023) ಯನ್ನು ಹೊರಡಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ನೌಕಾ ಪಡೆ ನೇಮಕಾತಿ 2023, ಅರ್ಹರು ಅರ್ಜಿ ಸಲ್ಲಿಸಿ
10th, PUC ಪಾಸಾದವರಿಗೆ ಅಸ್ಸಾಂ ರೈಫಲ್ಸ್ ನಲ್ಲಿ ಉದ್ಯೋಗ
KSIIDC Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: KSIIDC ನಿಗಮ
ಹುದ್ದೆಗಳ ಸಂಖ್ಯೆ: 7
ಕ್ರೋಢೀಕೃತ ವೇತನ: 75,000 ರೂ. ರಿಂದ 2,50,000 ರೂ.
ಉದ್ಯೋಗ ಸ್ಥಳ: ವಿಜಯಪುರ
ಕರ್ನಾಟಕ ಸರ್ಕಾರದ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತವು (ಕೆಎಸ್‌ಐಐಡಿಸಿ), ವಿಜಯಪುರ ವಿಮಾನ ನಿಲ್ದಾಣದ ಕಾರ್ಯಾಚರಣೆ ನಡೆಸುತ್ತಿದೆ. ನಿಗಮವು 01 ವರ್ಷದ ಅವಧಿಗೆ ಕ್ರೋಢೀಕೃತ ವೇತನದೊಂದಿಗೆ ಗುತ್ತಿಗೆ ಆಧಾರದ ಮೇಲೆ ಕೆಳಕಂಡ ಹುದ್ದೆಗಳಿಗೆ ನೇಮಕಮಾಡಲು ಪ್ರಸ್ತಾಪಿಸಲಾಗಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಸಿಬ್ಬಂದಿಯನ್ನು ಗುತ್ತಿಗೆಯ ಅವಧಿಯನ್ನು ಅವಶ್ಯಕತೆಗೆ ಅನುಗುಣವಾಗಿ ಇನ್ನೊಂದು ವರ್ಷದ ಅವಧಿಗೆ ಅಥವಾ ಅದಕ್ಕಿಂತಲೂ ಹೆಚ್ಚಿನ ಅವಧಿಗೆ ವಿಸ್ತರಿಸಬಹುದಾಗಿದೆ.
ಖಾಲಿ ಇರುವ ಹುದ್ದೆಗಳು:
ವಿಮಾನ ನಿಲ್ದಾಣದ ನಿರ್ದೇಶಕರು – 1
ಏರೋಡ್ರಂ ಸುರಕ್ಷತಾ/ ಭದ್ರತಾ ಅಧಿಕಾರಿ – 1
ವಿಮಾನ ನಿಲ್ದಾಣದ ರಕ್ಷಣೆ ಮತ್ತು ಅಗ್ನಿಶಾಮಕ ಮುಖ್ಯಸ್ಥ- 1
ಸಿವಿಲ್ ಮುಖ್ಯಸ್ಥ – 1
ಎಲೆಕ್ಟ್ರಿಕಲ್ ಮುಖ್ಯಸ್ಥ – 1
ಏರ್‌ಸೈಡ್ ಆಪರೇಷನಲ್ ಮ್ಯಾನೇಜರ್ – 1
ಟರ್ಮಿನಲ್ ಮ್ಯಾನೇಜರ್ – 1
ಶೈಕ್ಷಣಿಕ ಅರ್ಹತೆ:
KSIIDC Recruitment 2023 ಪ್ರಕಟಣೆಯ ಪ್ರಕಾರ ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿ ಪಡಿಸಲಾಗಿದೆ.
ಕ್ರೋಢೀಕೃತ ವೇತನ:
ವಿಮಾನ ನಿಲ್ದಾಣದ ನಿರ್ದೇಶಕರು – 1,25,000 ರೂ.
ಏರೋಡ್ರಂ ಸುರಕ್ಷತಾ/ ಭದ್ರತಾ ಅಧಿಕಾರಿ – 75000 ರೂ.
ವಿಮಾನ ನಿಲ್ದಾಣದ ರಕ್ಷಣೆ ಮತ್ತು ಅಗ್ನಿಶಾಮಕ ಮುಖ್ಯಸ್ಥ- 60,000 ರೂ.
ಸಿವಿಲ್ ಮುಖ್ಯಸ್ಥ – 80,000 ರೂ.
ಎಲೆಕ್ಟ್ರಿಕಲ್ ಮುಖ್ಯಸ್ಥ – 80,000 ರೂ.
ಏರ್‌ಸೈಡ್ ಆಪರೇಷನಲ್ ಮ್ಯಾನೇಜರ್ – 75,000 ರೂ.
ಟರ್ಮಿನಲ್ ಮ್ಯಾನೇಜರ್ – 1,00,000 ರೂ.
ವಯೋಮಿತಿ:
KSIIDC ಅಧಿಸೂಚನೆಯ ಪ್ರಕಾರ ಕನಿಷ್ಠ 35 ವರ್ಷ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಈ ಪ್ರಕಟಣೆ ಪ್ರಕಟಗೊಂಡ ದಿನಾಂಕದಿಂದ 07 ದಿನಗಳ ಒಳಗಾಗಿ ವಿದ್ಯಾರ್ಹತೆ ಮತ್ತು ಅನುಭವದ ವಿವರಗಳನ್ನು “ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ, ಖನಿಜ ಭವನ, 4ನೇ ಮಹಡಿ, ಪೂರ್ವ ಭಾಗ, ನಂ.49, ರೇಸ್ ಕೋರ್ಸ್ ರಸ್ತೆ, ಬೆಂಗಳೂರು-01″ ವಿಳಾಸಕ್ಕೆ ಕಳುಹಿಸಬೇಕು. ಯಾವುದೇ ಸ್ಪಷ್ಟನೆಗಾಗಿ ದಯವಿಟ್ಟು ಎಜಿಎಂ ಮೊಬೈಲ್ ಸಂಖ್ಯೆ: 9845580837/98485335660 ಸಂಪರ್ಕಿಸಿ.
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: ksiidc.karnataka.gov.in