ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (KSCCF Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿಪಡಿಸಿರುವ ದಿನಾಂಕದೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
KSCCF Recruitment 2025 ಸಂಕ್ಷಿಪ್ತ ವಿವರ:
- ನೇಮಕಾತಿ ಸಂಸ್ಥೆ: ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾಮಂಡಳ (KSCCF)
- ವೇತನ ಶ್ರೇಣಿ: ₹12,500 – ₹29,600/-
- ಹುದ್ದೆಗಳ ಸಂಖ್ಯೆ: 34
- ಉದ್ಯೋಗ ಸ್ಥಳ: ಬೆಂಗಳೂರು
ಹುದ್ದೆಗಳ ವಿವರ:
- ಫಾರಾಸಿಸ್ಟ್ – 07 ಹುದ್ದೆಗಳು
- ಪ್ರಥಮ ದರ್ಜೆ ಸಹಾಯಕರು – 10 ಹುದ್ದೆಗಳು
- ವಿಕ್ರಯ ಸಹಾಯಕರು (i) – 16 ಹುದ್ದೆಗಳು
- ವಿಕ್ರಯ ಸಹಾಯಕರು (ii) – 01 ಹುದ್ದೆ
ಶೈಕ್ಷಣಿಕ ಅರ್ಹತೆ:
KSCCF ಅಧಿಸೂಚನೆಯ ಪ್ರಕಾರ ಹುದ್ದೆಗನುಗುಣ ವಿದ್ಯಾರ್ಹತೆ:
- ಫಾರಾಸಿಸ್ಟ್: ಸರ್ಕಾರದ ಅಂಗೀಕೃತ ಸಂಸ್ಥೆಯಿಂದ Diploma in Pharmacy ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
- ಪ್ರಥಮ ದರ್ಜೆ ಸಹಾಯಕರು: ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ತೇರ್ಗಡೆಯಾಗಿರಬೇಕು.
- ವಿಕ್ರಯ ಸಹಾಯಕರು: ದ್ವಿತೀಯ ಪಿಯುಸಿ (PUC) ತೇರ್ಗಡೆಯಾಗಿರಬೇಕು.
ಇದರೊಂದಿಗೆ ಕನ್ನಡ ಓದುವ, ಬರೆಯುವ, ಮಾತನಾಡುವ ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು, ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್‌ನಲ್ಲಿ ಜ್ಞಾನ ಹೊಂದಿರಬೇಕು.
ವೇತನ ಶ್ರೇಣಿ:
- ಫಾರಾಸಿಸ್ಟ್ – ₹16,000 – ₹29,600/-
- ಪ್ರಥಮ ದರ್ಜೆ ಸಹಾಯಕರು – ₹13,600 – ₹26,000/-
- ವಿಕ್ರಯ ಸಹಾಯಕರು (i) – ₹12,500 – ₹24,000/-
- ವಿಕ್ರಯ ಸಹಾಯಕರು (ii) – ₹12,500 – ₹24,000/-
ವಯೋಮಿತಿ:
ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು:
- ಸಾಮಾನ್ಯ ವರ್ಗ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ
- ಪ್ರವರ್ಗ-2ಎ, 2ಬಿ, 3ಎ, 3ಬಿ: ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷ
- ಪ.ಜಾ / ಪ.ಪಂ / ಪ್ರವರ್ಗ-1: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ
- ವಿಕಲಚೇತನರು ಮತ್ತು ವಿಧವೆಯರಿಗೆ: 10 ವರ್ಷಗಳ ಸಡಿಲಿಕೆ
ಅರ್ಜಿ ಶುಲ್ಕ:
- ಪ.ಜಾ / ಪ.ಪಂ / ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ₹500/- (+ gateway charges)
- ಇತರೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ: ₹1000/- (+ gateway charges)
- ಪಾವತಿಸುವ ವಿಧಾನ: ಆನ್‌ಲೈನ್
KSCCF Recruitment 2025 ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 16-08-2025
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 14-09-2025
ಪ್ರಮುಖ ಲಿಂಕ್‌ಗಳು:
- ಅಧಿಸೂಚನೆ: ಡೌನ್ಲೋಡ್ ಮಾಡಿ
- ಆನ್‌ಲೈನ್ ಅರ್ಜಿ: Apply ಮಾಡಿ
- ಅಧಿಕೃತ ವೆಬ್ಸೈಟ್: virtualofficeerp.com/ksccf2025
ಇತರೆ ಮಾಹಿತಿಗಳನ್ನು ಓದಿ: