ಕೊಪ್ಪಳ ಜಿಲ್ಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (DHFWS Koppal Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಗ್ರಾಮ ಲೆಕ್ಕಾಧಿಕಾರಿ ನೇಮಕಾತಿ 2024
DHFWS Koppal Recruitment 2024 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ
ವೇತನ ಶ್ರೇಣಿ: ನಿಯಮಗಳ ಪ್ರಕಾರ
ಹುದ್ದೆಗಳ ಸಂಖ್ಯೆ: 38
ಉದ್ಯೋಗ ಸ್ಥಳ: ಕೊಪ್ಪಳ
ಶೈಕ್ಷಣಿಕ ಅರ್ಹತೆ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th (ವಿಜ್ಞಾನ)/ ಡಿಪ್ಲೊಮಾ/ ಬಿ.ಎಸ್ಸಿ ನರ್ಸಿಂಗ್/ ಬಿ.ಎಸ್ಸಿ ನ್ಯೂಟ್ರಿಷನ್/ ಪದವಿ/ ಬಿ.ಬಿ.ಎಂ/ ಎಂ.ಬಿ.ಎ/ ಬಿ.ಫಾರ್ಮಾ/ ಡಿ.ಫಾರ್ಮಾ/ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ – 3
ತಾಲೂಕಾ ಕಾರ್ಯಕ್ರಮ ವ್ಯವಸ್ಥಾಪಕರು – 1
ಡಿ.ಇ.ಐ.ಸಿ ವ್ಯವಸ್ಥಾಪಕರು – 1
ಎನ್.ಆರ್.ಸಿ ಡಯಟ್ ಕೌನ್ಸಲರ್ – 1
ಪ್ರಯೋಗಶಾಲಾ ತಂತ್ರಜ್ಞರು – 2
ಎಲ್.ಹೆಚ್.ವಿ ಎನ್.ಯು.ಹೆಚ್.ಎಂ – 2
ಆರ್.ಬಿ.ಎಸ್.ಕೆ ನೇತ್ರ ಸಹಾಯಕರು/ ಫಾರ್ಮಾಸಿಸ್ಟ್ – 2
ಫಾರ್ಮಾಸಿಸ್ಟ್ ಎನ್.ಯು.ಹೆಚ್.ಎಂ ಕಾರ್ಯಕ್ರಮ – 1
ಓ.ಟಿ. ಟೆಕ್ನಿಷಿಯನ್ – 2
ಲಸಿಕಾ ಕ್ಷೇತ್ರ ಕಾರ್ಯಕರ್ತರು (ಐ.ಎಫ್.ವಿ) – 1
ಶುಶ್ರೂಷಣಾಧಿಕಾರಿಗಳು – 17
ಆಡಿಯೋ ಮೆಟ್ರಿಕ್ ಅಸಿಸ್ಟಂಟ್ – 1
ಇನ್ಸಟ್ರಕ್ಟರ್ ಫಾರ್ ಹಿಯರಿಂಗ್ ಇಂಪೇರ್ಡ್ ಚಿಲ್ಡ್ರನ್ – 1
ಅಡ್ಮಿನಿಸ್ಟ್ರೇಟಿವ್ ಕಮ್ ಪ್ರೋಗ್ರಾಮ್ ಅಸಿಸ್ಟಂಟ್ – 1
ಆಪ್ತಸಮಾಲೋಚಕರು – 2
ವೇತನ ಶ್ರೇಣಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅನುಸಾರ ವೇತನವನ್ನು ನಿಗದಿಪಡಿಸಲಾಗಿರುತ್ತದೆ. ಅಧಿಸೂಚನೆ ಓದಿ.
ವಯೋಮಿತಿ:
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಪ್ಪಳ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 45 ವರ್ಷ ಮೀರಿರಬಾರದು.
ಅರ್ಜಿ ಶುಲ್ಕ:
ಅರ್ಜಿ ಶುಲ್ಕ ಇರುವುದಿಲ್ಲ.
DHFWS Koppal Recruitment 2024 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 02-02-2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 16-02-2024
ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್’ಲೋಡ್
ಆನ್‌ಲೈನ್ ಅರ್ಜಿ: Apply ಮಾಡಿ
ಅಧಿಕೃತ ವೆಬ್ ಸೈಟ್: koppal.nic.in