ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (BDA Recruitment 2023) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2023
ಬೆಂಗಳೂರು ಮೆಟ್ರೋ ರೈಲು ನಿಗಮ ನೇಮಕಾತಿ 2023
BDA Recruitment 2023 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA)
ವೇತನ ಶ್ರೇಣಿ: 21,400 ರೂ. ರಿಂದ 52,650 ರೂ.
ಹುದ್ದೆಗಳ ಸಂಖ್ಯೆ: 02
ಉದ್ಯೋಗ ಸ್ಥಳ: ಬೆಂಗಳೂರು
ಶೈಕ್ಷಣಿಕ ಅರ್ಹತೆ:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 12th ಪೂರ್ಣಗೊಳಿಸಿರಬೇಕು.
ಹುದ್ದೆಗಳ ವಿವರ:
ಬೆರಳಚ್ಚುಗಾರ – 01
ಸ್ಟೆನೋಗ್ರಾಫರ್ – 01
ವಯೋಮಿತಿ:
BDA ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ ಮೀರಿರಬಾರದು.
ವೇತನ ಶ್ರೇಣಿ:
ಬೆರಳಚ್ಚುಗಾರ – 21,400 ರೂ. ರಿಂದ 42,000 ರೂ.
ಸ್ಟೆನೋಗ್ರಾಫರ್ – 27,650 ರೂ. ರಿಂದ 52,650 ರೂ.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ Commissioner, Bangalore Development Authority, T. Chowdaiah Road, Kumara Park West, Bengaluru – 560020, Karnataka ಇವರಿಗೆ 08-12-2023 ರ ಮೊದಲು ಕಳುಹಿಸಬೇಕು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-11-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 08-12-2023
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: eng.bdabangalore.org