BBMP Recruitment 2024: ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

Telegram Group Join Now
WhatsApp Group Join Now

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ಇರುವ‌ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ (BBMP Recruitment 2024) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಈ ಉದ್ಯೋಗ ಮಾಹಿತಿಯನ್ನು ನೀಡಲಾಗಿದೆ ಗಮನಿಸಿ.

ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.

ನೀರು ಸರಬರಾಜು ಮಂಡಳಿ ನೇಮಕಾತಿ 2024

NIMHANS Recruitment 2024

BBMP Recruitment 2024 ಸಂಕ್ಷಿಪ್ತ ವಿವರ:

ನೇಮಕಾತಿ ಸಂಸ್ಥೆ: ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ರಿ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)
ವೇತನ ಶ್ರೇಣಿ: 21,000 ರೂ. ರಿಂದ 45,000 ರೂ.
ಹುದ್ದೆಗಳ ಸಂಖ್ಯೆ: 444
ಉದ್ಯೋಗ ಸ್ಥಳ: ಬೆಂಗಳೂರು

ಶೈಕ್ಷಣಿಕ ಅರ್ಹತೆ:
BBMP ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10th, 12th, ಜಿ.ಎನ್.ಎಂ, ಎ.ಎನ್.ಎಂ, ಎಂ.ಎಸ್ಸಿ, ಬಿ.ಎಸ್ಸಿ, ಡಿಪ್ಲೊಮಾ ಇನ್ ನರ್ಸಿಂಗ್, ಬಿ.ಫಾರ್ಮಾ/ ಡಿ.ಫಾರ್ಮಾ, ಬಿಇ, ಬಿ.ಟೆಕ್, ಎಂ.ಟೆಕ್, ಎಂಬಿಎ, ಎಂಬಿಬಿಎಸ್, ಎಂಡಿ (ಓಬಿಜಿ/ ಪಿಡಿಯಾಟ್ರಿಕ್ಸ್/ ಮೆಡಿಸಿನ್/ ಅನಸ್ಥೇಷಿಯಾ/ ರೆಡಿಯೋಲಾಜಿ) ಪೂರ್ಣಗೊಳಿಸಿರಬೇಕು. (ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ಓದಿ)

ವಯೋಮಿತಿ:
ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ರಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಸೂಚನೆ ಪ್ರಕಾರ ಹುದ್ದೆಗಳಿಗೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 50 ವರ್ಷ ಮೀರಿರಬಾರದು.

BBMP Recruitment 2024 ಹುದ್ದೆಗಳ ವಿವರ:
ಬಯೋ ಮೆಡಿಕಲ್ ಇಂಜಿನಿಯರ್ – 1
ಜೋನಲ್ ಪ್ರೋಗ್ರಾಮ್ ಮ್ಯಾನೇಜರ್ – 2
ಎಪಿಡೆಮಿಯೋಲಾಜಿಸ್ಟ್ – 1
ಪಿ.ಹೆಚ್.ಸಿ.ಓ (ಎ.ಎನ್.ಎಂ) – 154
ಹೆಚ್.ಐ.ಓ (ಎಂ.ಹೆಚ್.ಡಬ್ಲ್ಯೂ) – 115
ಸ್ಟಾಫ್ ನರ್ಸ – 40
ಫಾರ್ಮಾಸಿಸ್ಟ್ – 48
ಲ್ಯಾಬ್ ಟೆಕ್ನಿಷಿಯನ್ – 5
ಓಬಿಜಿ – 4
ಪಿಡಿಯಾಟ್ರಿಷನ್ – 2
ಫಿಜಿಷಿಯನ್ – 5
ಅನಾಸ್ಥೆಟಿಸ್ಟ್ – 2
ರೆಡಿಯೋಲಾಜಿಸ್ಟ್ – 6
ಓಟಿ ಟೆಕ್ನಿಷಿಯನ್ – 1
ಆಡಿಯೋಲಾಜಿಸ್ಟ್ – 1
ಮೆಡಿಕಲ್ ಆಫೀಸರ್ – 1
ಸೀನಿಯರ್ ಟ್ರಿಟಮೆಂಟ್ ಸೂಪರ್ವೈಸರ್ – 2
ಲ್ಯಾಬ್ ಟೆಕ್ನೋಲಾಜಿಸ್ಟ್ – 4
ಟ್ಯೂಬರ್ಕ್ಯುಲೋಸಿಸ್ ಹೆಲ್ತ್ ವಿಸಿಟರ್ – 6
ಪ್ಯಾರಾ ಮೆಡಿಕಲ್ ವರ್ಕರ್ – 2
ಡಿಸ್ಟ್ರಿಕ್ಟ್ ಕಮ್ಯೂನಿಟಿ ಮೊಬಿಲೈಜರ್ – 1
ಓಫ್ಥಲ್ಮೊಲೊಜಿಸ್ಟ್ – 1
ಕಮ್ಯೂನಿಟಿ ನರ್ಸ್ – 1
ಸೈಕಿಯಾಟ್ರಿಕ್ ನರ್ಸ್ – 1

ವೇತನ ಶ್ರೇಣಿ:
ಬೆಂಗಳೂರು ನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ(ರಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಸೂಚನೆಯ ಓದಿ.

ನೇರ ಸಂದರ್ಶನ:
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ದಿನಾಂಕ: 13-02-2024 ರಿಂದ 15-02-2024 ರ ವರೆಗೆ, ಸಮಯ ಬೆಳಿಗ್ಗೆ 10:30 ರಿಂದ ಸಂಜೆ 4:30 ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬೇಕು. ವಿಳಾಸ: ಡಾ|| ರಾಜ್ ಕುಮಾರ್ ಗಾಜಿನ ಮನೆ, ಬಿಬಿಎಂಪಿ ಕೇಂದ್ರ ಕಛೇರಿ, ಎನ್.ಆರ್.ಚೌಕ, ಬೆಂಗಳೂರು

BBMP Recruitment 2024 ಪ್ರಮುಖ ದಿನಾಂಕಗಳು:
ಅಧಿಸೂಚನೆ ಹೊರಡಿಸಿದ ದಿನಾಂಕ:‌ 08-02-2024
ನೇರ ಸಂದರ್ಶನ ದಿನಾಂಕ: 13-02-2024 ರಿಂದ 15-02-2024 ರ ವರೆಗೆ, ಸಮಯ ಬೆಳಿಗ್ಗೆ 10:30 ರಿಂದ ಸಂಜೆ 4:30

ಪ್ರಮುಖ ಲಿಂಕ್’ಗಳು:
ಅಧಿಸೂಚನೆ: ಡೌನ್‌ಲೋಡ್
ಅರ್ಜಿ ನಮೂನೆ: ಡೌನ್‌ಲೋಡ್
ಅಧಿಕೃತ ವೆಬ್‌ಸೈಟ್: bbmp.gov.in

Leave a Comment