ಕರ್ನಾಟಕ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (Karnataka Postal Circle Recruitment 2025) ಯನ್ನು ಪ್ರಕಟಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ನಿಗದಿ ಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ ಸೇರಿದಂತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ನೀಡಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಅಧಿಸೂಚನೆಯನ್ನು ಸರಿಯಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
Karnataka Postal Circle Recruitment 2025 ಸಂಕ್ಷಿಪ್ತ ವಿವರ:
ನೇಮಕಾತಿ ಸಂಸ್ಥೆ: ಕರ್ನಾಟಕ ಅಂಚೆ ಇಲಾಖೆ (Karnataka Postal Circle)
ವೇತನ ಶ್ರೇಣಿ: 25,500 ರೂ. ರಿಂದ 81,100 ರೂ.
ಹುದ್ದೆಗಳ ಸಂಖ್ಯೆ: 129
ಉದ್ಯೋಗ ಸ್ಥಳ: ಕರ್ನಾಟಕ
ಹುದ್ದೆಗಳ ವಿವರ:
ಅಂಚೆ ಸಹಾಯಕ (ವೃತ್ತ ಕಚೇರಿ ಮತ್ತು ಪ್ರಾದೇಶಿಕ ಕಚೇರಿಗಳು) – 05
ಅಂಚೆ ಸಹಾಯಕ (ಅಂಚೆ ಕಚೇರಿ) – 114
ವಿಂಗಡಣೆ ಸಹಾಯಕ (Railway Mail Service) – 10
ಶೈಕ್ಷಣಿಕ ಅರ್ಹತೆ:
ಕರ್ನಾಟಕ ಅಂಚೆ ಇಲಾಖೆ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಿರಬೇಕು
ವಯೋಮಿತಿ:
ಕರ್ನಾಟಕ ಅಂಚೆ ಇಲಾಖೆ ಅಧಿಸೂಚನೆ ಪ್ರಕಾರ ಅಭ್ಯರ್ಥಿಯು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:
ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯ ಮೂಲಕ ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ 02-07-2025 ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
ಪೋಸ್ಟ್ ಮಾಸ್ಟರ್ ಜನರಲ್, ಉತ್ತರ ಕರ್ನಾಟಕ ಪ್ರದೇಶ, ಧಾರವಾಡ – 580001
ಪೋಸ್ಟ್ ಮಾಸ್ಟರ್ ಜನರಲ್, ದಕ್ಷಿಣ ಕರ್ನಾಟಕ ಪ್ರದೇಶ, ಬೆಂಗಳೂರು – 560001
ಪೋಸ್ಟ್ ಮಾಸ್ಟರ್ ಜನರಲ್, ಬೆಂಗಳೂರು ಪ್ರಧಾನ ಕಚೇರಿ ಪ್ರದೇಶ, ಬೆಂಗಳೂರು – 560001
ಜಿಎಂ(ಪಿಎ&ಎಫ್), ಬೆಂಗಳೂರು ಜಿಪಿಒ ಕಟ್ಟಡ, ಬೆಂಗಳೂರು – 560001
ಅಧಿಕಾರಿ ಉಸ್ತುವಾರಿ, ಪಿ & ಟಿ ಆಡಳಿತ ಘಟಕ, ಎಪಿಎಸ್ ವಿಂಗ್, ಬ್ರಿಗೇಡಿಯರ್ ಆಫ್ ದಿ ಗಾರ್ಡ್ಸ್, ರೆಜಿಮೆಂಟಲ್ ಸೆಂಟರ್, ಪಿನ್ 900746, ಸಿ/ಒ 56 ಎಪಿಒ
ಜಿಎಂ, ಸಿಇಪಿಟಿ, ಬೆಂಗಳೂರು – 560001
Karnataka Postal Circle Recruitment 2025 ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 09-06-2025
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 02-07-2025
ಪ್ರಮುಖ ಲಿಂಕ್ ಗಳು:
ಅಧಿಸೂಚನೆ ಹಾಗೂ ಅರ್ಜಿ ನಮೂನೆ: ಡೌನ್’ಲೋಡ್
ಅಧಿಕೃತ ವೆಬ್ ಸೈಟ್: karnatakapost.gov.in
ಇತರೆ ಮಾಹಿತಿಗಳು: